ಕಸ್ತೂರಿಯಲ್ಲಿ ಹೊಸ ಕಾರ್ಯಕ್ರಮಗಳ ಸರಮಾಲೆ
Posted date: 13 Fri, Feb 2015 – 09:02:32 AM

ಅಪ್ಪಟ ಕನ್ನಡ ವಾಹಿನಿಯಾದ ಕಸ್ತೂರಿ ಟಿ.ವಿ. ಈಗ ಹೊಸ ರೂಪದಲ್ಲಿ ಬರುತ್ತಿದೆ.  ೨೦೦೭ರಲ್ಲಿ ಆರಂಭವಾದ ಈ ವಾಹಿನಿ ಈವರೆಗೆ ಕನ್ನಡದ ಹಲವಾರು ಯುವ ನವ ಪ್ರತಿಭೆಗಳಿಗೆ ವೇದಿಕೆಯಾಗಿ ಕರ್ನಾಟಕದ ಹೆಮ್ಮೆಯ ಮನೆಮಾತಾಗಿತ್ತು. ಈಗ ಮತ್ತೊಂದು ಮನೋರಂಜನಾ ಸಂಸ್ಥೆಯಾದ ವೈಟ್ ಹಾರ್ಸ್ ನೆಟ್‌ವರ್ಕ್ ಕಸ್ತೂರಿ ಛಾನೆಲ್‌ನ ಜವಾಬ್ದಾರಿ ವಹಿಸಿಕೊಂಡಿದೆ.

ಪಿ.ಕೈಲಾಸಂ ನೇತೃತ್ವದ ವೈಟ್‌ಹಾರ್ಸ್ ನೆಟ್‌ವರ್ಕ್ ಸಂಸ್ಥೆ ಕಸ್ತೂರಿ ವಾಹಿನಿಯ ಮೂಲಕ ಹೊಸ ಹೊಸ ರಿಯಾಲಿಟಿ ಷೋಗಳು, ಟಾಕ್‌ಷೋಗಳು, ಹರಟೆ ಕಾರ್ಯಕ್ರಮಗಳು, ನಗೆ ಟಾನಿಕ್‌ಗಳು, ಸ್ಟಾರ್ ಷೋಗಳು ಹಾಗೂ ಧಾರಾವಾಹಿಗಳನ್ನು ಕನ್ನಡ ಕಿರುತೆರೆ ವೀಕ್ಷಕರಿಗಾಗಿ ಹೊರತರುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.  ಈ ಎಲ್ಲಾ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಲೆಂದು ಮೊನ್ನೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದಿತು.

ವೈಟ್‌ಹಾರ್ಸ್ ಸಂಸ್ಥೆಯ ನಿರ್ದೇಶನದ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಕೈಲಾಸಂ, ವ್ಯವಹಾರ ಮುಖ್ಯಸ್ಥ ಜಿ.ವಿ.ಕೃಷ್ಣಮೂರ್ತಿ ಹಾಗೂ ಮುಖ್ಯ ಸಂಘಟಕ ಶಿವಕುಮಾರ್ ಛಾನಲ್‌ಗೆ ಹೊಸರೂಪ, ಹೊಸ ವಿನ್ಯಾಸ, ಹೊಸಕಳೆ ನೀಡುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.  ಛಾನಲನ್ನು ಜನರಿಗೆ ಇನ್ನೂ ಹತ್ತಿರವಾಗುವಂತಹ ನವನವೀನ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ನಿರ್ದೇಶಕರಾದ ಪಿ.ಕೈಲಾಸಂರವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ನಟಿ ಮಾಳವಿಕಾ ಅವಿನಾಶ್, ಸುಶ್ಮಾರಾವ್, ಒಗ್ಗರಣೆಡಬ್ಬಿ ಖ್ಯಾತಿಯ ಮುರುಳಿ ಅಲ್ಲದೆ ಇನ್ನೂ ಕಲಾವಿದರು ಹಾಜರಿದ್ದು ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.  ಸಖತ್ ಅತ್ತೆ ಸೂಪರ್ ಸೊಸೆ ಟಾಕ್ ಷೋನ ನಿರೂಪಕಿ ಸುಶ್ಮಾರಾವ್ ಮಾತನಾಡಿ ಈ ಕಾರ್ಯಕ್ರಮ ನೋಡಿದ ನಂತರ ಕೆಲ ವರ್ಷಗಳಿಂದ ಮುನಿಸಿಕೊಂಡು ವಿದೇಶದಲ್ಲಿದ್ದ ಸೊಸೆ ತನ್ನ ಅತ್ತೆಯ ಬಳಿ ಬಂದು ಒಂದಾಗಿದ್ದಾರೆ.  ಹೀಗೆ ಹಲವಾರು ಅತ್ತೆ-ಸೊಸೆಯರು ತಮ್ಮಲ್ಲಿನ ವೈಷಮ್ಯವನ್ನು ತೊರೆದು ಒಂದಾಗಿ ಬಾಳುವಂತೆ ನಮ್ಮ ಕಾರ್ಯಕ್ರಮ ಮಾಡಿದೆ ಎಂದು ಹೇಳಿಕೊಂಡರು.

ಕಥೆ ಅಲ್ಲ ಜೀವನ ಖ್ಯಾತಿಯ ಮಾಳವಿಕಾ ಈಗ ಆರದಿರಲಿ ಬೆಳಕು ಎಂಬ ಹೆಸರಿನಲ್ಲಿ ನೊಂದ ಜೀವಗಳಿಗೆ ಸಾಂತ್ವನ ಹೇಳಿ ಅವರನ್ನು ಒಂದುಗೂಡಿಸುವಲ್ಲಿ ಪ್ರಯತ್ನಿಸುವ ಕಾರ್ಯ ನಿರ್ವಹಿಸಿಕೊಂಡಿದ್ದಾರೆ.  ಭಿನ್ನಾಭಿಪ್ರಾಯದಿಂದ ದೂರವಿದ್ದ ತಾಯಿ-ಮಗ, ಗಂಡ-ಹೆಂಡತಿ, ಅಣ್ಣ-ತಂಗಿ, ತಂದೆ-ಮಗ, ಕುಟುಂಬಗಳನ್ನು ಒಂದೇ ವೇದಿಕೆಯಲ್ಲಿ ಕರೆಸಿ ಅವರ ಭಿನ್ನಾಭಿಪ್ರಾಯಗಳಿಗೆ ಕಾರಣಗಳನ್ನು ಅರಿತುಕೊಂಡು ಸಂಧಾನದ ಮೂಲಕ ಅವರನ್ನು ಒಂದುಗೂಡಿಸುವ ಪ್ರಯತ್ನ ಆರದಿರಲು ಬೆಳಕು ಕಾರ್ಯಕ್ರಮದ ಮೂಲಕ ನಡೆದಿದೆ.  ಅದರ ನಿರೂಪಕಿಯಾದ ಮಾಳವಿಕ ಈಗಾಗಲೇ ಹಲವಾರು ಕುಟುಂಬಗಳನ್ನು ಒಗ್ಗೂಡಿಸುವಲ್ಲಿ ಸಫಲರಾಗಿದ್ದಾರೆ.  ಅವರು ಮಾತನಾಡಿ ನಾನು ಈ ಹಿಂದೆ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ನಿಲ್ಲಿಸಿದಾಗ ಪ್ರತಿದಿನ ನನ್ನ ಮನೆ ಬಳಿ ಬಂದು ಸಂಧಾನಕ್ಕಾಗಿ ಬರುತ್ತಿದ್ದ ಜನರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿಕೊಂಡರು.  ಮಾತಂದ್ರೆ ಮಾತು ಷೋನ ನಿರೂಪಕ ಮುರಳಿ ಕಾರ್ಯಕ್ರಮದ ವಿವರಗಳನ್ನು ತಿಳಿಸಿಕೊಟ್ಟರು.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed